Posts

Showing posts from July, 2021

ಕನ್ನಡ ಕಥೆ, ಸೌಮ್ಯ ಸಿ ಡಿ

*ಶಂಭುವಿನ ಸ್ವಾಭಿಮಾನ* ಒಂದು ಪುಟ್ಟ ಊರು. ಆ ಊರಿನಲ್ಲಿ ಸಣ್ಣ ಮನೆಯಲ್ಲಿ ಶಂಭು ಹಾಗೂ ಅವನ ಕುಟುಂಬದವರು ವಾಸಿಸುತ್ತಿದ್ದರು. ಇವರದ್ದು ತುಂಬಾ ಬಡ ಕುಟುಂಬ.ದುಡಿದರೆ ಮಾತ್ರ ಊಟ ಎನ್ನುವ ಪರಿಸ್ಥಿತಿ.ಇಬ್ಬರು ಕೂಲಿ ಕೆಲಸಕ್ಕೆ ಹೋಗುವವರು. ಅವರು ಅವಿದ್ಯಾವಂತರು ಕೂಡ ಹೌದು.ಶಂಭುವಿಗೆ ಈ ಬಡತನ ಸಾಕಾಗಿ ಹೋಗಿತ್ತು. ಅವನು ತಾನು ಓದಿ ಮುಂದೆ ಒಳ್ಳೆಯ ಉದ್ಯೋಗಕ್ಕೆ ಸೇರಿ ಸಮಾಜ ಸೇವೆ ಮಾಡಬೇಕು ಎಂದು ಕನಸು ಕಾಣುತ್ತಿದ್ದ. ಅವನು ಕಷ್ಟಪಟ್ಟು ದುಡಿಯುವುದರ ಜೊತೆಗೆ,ಶಾಲೆಗೆ ಹೋಗಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ.ಕಷ್ಟಪಟ್ಟು ಕಲಿಯುತ್ತಿದ್ದ ಶಂಭುವಿಗೆ ಜೀವನದಲ್ಲಿ ಮುಂದೆ ಬರಬೇಕು ಏನಾದರೂ ಸಾಧಿಸಬೇಕು ಎಂಬ ಆಸೆ ಆಕಾಂಕ್ಷೆಗಳು ಬೆಳೆಯತೊಡಗಿತು. ಮನೆಯ ಕಷ್ಟಗಳ ನಡುವೆಯೂ ಅವನು ಎಸ್. ಎಸ್. ಎಲ್.ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಗೊಂಡ.ನಂತರ ಮುಂದೆ ಓದಬೇಕು ಅನ್ನುವ ಆಸೆ,ಆದರೆ ಬಡತನ.ಕಾಲೇಜು ಮೆಟ್ಟಿಲು ಹತ್ತಬೇಕಾಗಿದ್ದ ಶಂಭು ಕೆಲಸಕ್ಕೆ ಸೇರಿಕೊಂಡ.ದಿನಾ ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ, ಕೂಡಿಡುತ್ತಿದ್ದ.ಇದರ ಜೊತೆಗೆ ಅವನು ತನ್ನ ಸಹಪಾಠಿಗಳೊಂದಿಗೆ ಕಾಲೇಜಿನ ವಿಷಯವನ್ನು, ಚಟುವಟಿಕೆಗಳ ಬಗ್ಗೆ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ.  ಒಂದು ದಿನ ಅವನು ತನ್ನ ಮುಂದಿನ ಓದುವಿಕೆಯ ಹಂಬಲವನ್ನು ತನ್ನ ಧಣಿಗಳ ಮುಂದೆ ಪ್ರಸ್ತಾಪಿಸಿದ.ಅವರು ಶಂಭುವಿಗೆ ಉಪಾಯ ತಿಳಿಸಿದರು.ಅವನಿಗೆ ನೇರವಾಗಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ಬರೆಯಲು...

By, Anusha T H

ಆಟದ ಗಮ್ಮತ್ತ್ ನಮ್ಮ ತುಳುನಾಡ್ ತೇಳಿರೆ ಎಲ್ಲಾ ಆಚರಣೆಗಳ ಬುತ್ತಿಪಾತ್ರೆ ಇದ್ದಂಗೆ.  ಎಷ್ಟ್ ಶ್ರೀಮಂತನೇ ಆಗಲಿ ಬಡವನೇ ಆಗಲಿ ಹಿಂದೆನ ಕಾಲಲಿ ನಡ್ಸಿಕಂಡ್ ಬಾತ್ತಿದ್ದ ಪದ್ದತಿನ ಚೂರ್ ಚೂರ್ ನೆನ್ಪಿಸಿಕಂಡ್ ಆಚರಣೆ ಮಾಡ್ವೆ. ಇದ್ ನಮ್ಮ ನಾಡ್ನ ಹೆಮ್ಮೆ.  ಪತ್ತನಾಜೆಗೆ ಮುಂದೆ ಎಲ್ಲ ಜಾತ್ರೆಗ, ಆಟಗ ಮುಗೆಕ್ಕು. ಪತ್ತನಾಜೆ ದಿನ ಆಟದವು(ಯಕ್ಷಗಾನದವು)  ಕಾಲ್ಂದ ಗೆಜ್ಜೆ ಬಿಚ್ಚುವ ದಿನ. ಮತ್ತೆ ಆಟ ಇಲ್ಲೇ. ಇನ್ನ್ ಬರುವ ವರ್ಷಂದ ಸುರು. ಇದುನೂ ತುಳುನಾಡಿನ ಆಚರಣೆಲಿ ಒಂದು.  ಹಂಗೆ ಇರಿಕನ ನಮ್ಮ ಚೊಕ್ಕಾಡಿಲಿ ಪಗ್ಗು ತಿಂಗಳಲ್ಲಿ ಜಾತ್ರೆ ಉಟ್ಟು. ಜಾತ್ರೆಗೆ ಬೇರೆ ಬೇರೆ ಕಡೆಂದ ಸಂತೆಯವು, ಮಡಿಕೆ ಮಾರೋವು, ತೊಟ್ಟಿಲುನವು, ಸರ್ಕಸ್ನವು ಎಲ್ಲ ಬಂದ್ ಅವರವರ ವ್ಯಾಪಾರ ಸುರು ಮಾಡ್ವೆ.  ಜಾತ್ರೆ ಆಗಿ ಎರ್ಡ್ ದಿನ ಕಳ್ದ್ ಆಟದವು ಚೊಕ್ಕಾಡಿಗೆ ಬಂದ. ಆವುಕೆ ರಂಗಸ್ಥಳ ಅಕು. ಅದರ ಚೊಕ್ಕಾಡಿ ಪೇಟೆಲಿ ಮಾಡೋಲ. ಬಾರಿ ಆಡಂಬರಲಿ ಮಿನ್ಕಿದೆ. ರಂಗಸ್ಥಳದ ಚೂರು ದೂರಲಿ ಒಂದು ಬಂಗ್ಳೆ ಉಟ್ಟು. ಬಾರಿ ಎತ್ತರಲಿ. ಆಟದವುಕೆ ವೇಸ ಹಾಕಿಕೆ ಆ ಬಂಗ್ಳೆಲಿ ಜಾಗೆ ಮಾಡಿ ಕೊಟ್ಟೊಲ. ಅಲ್ಲಿ ಆಟದವು ವೇಸ ಹಾಕಿ ಅಡಿಲಿ ಇದ್ದ ರಂಗಸ್ಥಳಕ್ಕೆ ಬರೋಕು.  ಎತ್ತರದ ಬಂಗ್ಳೆಂದ ಇಳ್ದ್ ಬಾಕನ ದಾಟಿಕೆ ಒಂದ್ ಕಡಂಗ ಸಿಕ್ಕಿದೆ. ದನಗ ಅಡ್ಡ ದಾಟದಂಗೆ ಕಡಂಗ ತೆಗ್ದ್ ಇಸೋಲ. ಮನುಷ್ಯ ಅಡ್ಡ ದಾಟಿಕೆ ಕಮುನ ಪಾಲ ಹಾಕೋಲ. ಆಟದವುನೂ ಅ ಪಾಲ ದಾಟಿಯೇ ಬರೋಕು....

Art by, Kousthubha K

Image
Art by, Kousthubha K Class,  1st B.Com (B)

Art By, Roopa A S

Image
 Art by, Roopa.A.S  Class, 2nd B.Com(B)

Art by, Kousthubha K

Image
Art by,  Kousthubha K Class, 1st B.Com(B)

Art by, Roopa A S

Image
Art by, ROOPA A S CLASS, 2nd B.Com (B)

Art by, Kousthubha K

Image
By, KOUSTHUBHA K CLASS,  1ST B.Com(B)

ಕನ್ನಡ ಕಥೆ, ಸೌಮ್ಯ ಸಿ ಡಿ

ಪಿತೃ ವಾತ್ಸಲ್ಯ ಎಲ್ಲವೂ ನಿಶ್ಚಿಂತೆಯಿಂದ ನಡೆಯುತ್ತಿದ್ದ ಸಮಯ ಇದಾಗಿತ್ತು.ಹೀಗಿರಬೇಕಾದರೆ ಒಂದು ದಿನ ಅನಿರೀಕ್ಷಿತವಾದಂತಹ ಘಟನೆ ನಡೆಯುತ್ತದೆ. ನಿಶಾಳ ತಂದೆಗೆ ರಸ್ತೆ ಅಪಘಾತವಾಗುತ್ತದೆ.ಆ ಊರಿನ ಜನರು ಅವರನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ.ನಿಶಾ ಅಪ್ಪನಿಗೆ ಒಬ್ಬಳೇ ಮಗಳು.ಅವಳು ಪರಊರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡಿದ್ದಳು.ಅಪ್ಪನಿಗೆ ಆದ ಅಪಘಾತದ ಸುದ್ದಿಯನ್ನು ಕೇಳಿ ಭಯ,ಆತಂಕಗೊಂಡು ತನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಬಿಟ್ಟು ಅಪ್ಪನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ.ಅಪ್ಪನಿಗೆ ಆದಂತಹ ಗಾಯಗಳನ್ನು ನೋಡಿ,ಅವರ ಪರಿಸ್ಥಿತಿಯನ್ನು ನೋಡಲಾರದೆ ಅಳುತ್ತಾಳೆ.ಹೀಗೆ ನಿಶಾ ಆಸ್ಪತ್ರೆಯಲ್ಲಿ ಒಂದು ಕಡೆ ಕುಳಿತುಕೊಂಡು ನೆನಪುಗಳ ಪುಟಗಳನ್ನು ಒಂದೊಂದಾಗಿ ಮನಸ್ಸಿನಲ್ಲಿಯೇ ಓದಲಾರಂಭಿಸುತ್ತಾಳೆ. ನಾನು ಬಾಲ್ಯದಲ್ಲಿದ್ದಾಗ ಅಮ್ಮನನ್ನು ಕಳೆದುಕೊಂಡೆ.ನನ್ನನ್ನು ಅಪ್ಪ ಅಮ್ಮ ಇಬ್ಬರ ಸ್ಥಾನದಲ್ಲಿ ನಿಂತು ಪೋಷಿಸಿದವರು ಅಪ್ಪ. ತಾಯಿಯ ಪ್ರೀತಿ,ವಾತ್ಸಲ್ಯ,ಮಮತೆ, ಪ್ರೋತ್ಸಾಹ,ಸಲಹೆ ಎಲ್ಲವನ್ನು ಅಪ್ಪನೇ ನೀಡುತ್ತಿದ್ದರು.ನಾನು ಬಾಲ್ಯದಲ್ಲಿದ್ದಾಗ ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಜಾತ್ರೆಗೆ ಕರೆದುಕೊಂಡು ಹೋದ ಕ್ಷಣ ನೆನಪಿಸಿಕೊಂಡಾಗಲೆಲ್ಲಾ ಮೈ ರೋಮಾಂಚನವಾಗುತ್ತದೆ. ತಾನು ಸಂತೆಯಲ್ಲಿ ಕೇಳಿದ ಎಲ್ಲಾ ವಸ್ತುಗಳನ್ನು ತೆಗೆದುಕೊಡುತ್ತಿದ್ದ ಸಾಹುಕಾರ ಅಪ್ಪ. ಇದಕ್ಕಾಗಿ ಅಪ್ಪ ಕೆಲವು ಬಾರಿ ಗದರಿದ್ದು,ಇನ್ನೂ ಕೆಲವು ಬಾರಿ ನಾನು ಪೆಟ್ಟು ತಿಂದಿದ...

Art by, Sudheendra

Image
Art by,  Sudheendra  Class,  2nd B.Com(B)

Article by, Sushma Mulugadu

ನಮ್ಮ ಜೀವನ ಕೊರೋನಾದಲ್ಲಿ  ನಮ್ಮ ಜೀವನ......... ಸಾಯುತಿವೆ ನೂರಾರು ಜೀವಗಳು  ಕಾರಣ ತಿಳಿಯದೆ ಅಳುತಿವೆ ಶಿಶುಗಳು ಯಾರೋ ಮಾಡಿದ ಪಾಪ  ಸಿಕ್ಕಿದೆ ದೇಶಕ್ಕೆ ಶಾಪ..... ಒಳ್ಳೆಯ ಗಾಳಿಗೆ ಹೆಣಗುತ್ತಿವೆ ಜೀವಿಗಳು  ಯಾರೋ ಮಾಡಿದ ಪಾಪಕ್ಕೆ ಅಳುತ್ತಿವೆ ದೇಶದ ಕಂದಮ್ಮಗ ಳು ಕನಸು ಕಟ್ಟಿದ ಕಂಗಳಲಿ ಈಗ ಕಾಣುತ್ತಿದೆ ಕಣ್ಣೀರಧಾರೆ.... ಅಸ್ಥವ್ಯಸ್ಥವಾಗಿದೆ  ವ್ಯಾಪಾರಸ್ಥರ ಜೀವನ  ಯಾವತ್ತು ತೊಲಗುವುದೋ  ಈ ಕೊರೋನಾ? ಒಂದನೇ ಅಲೆಯಲ್ಲಿ ಮುಗಿಯಿತೆಂದರೆ ಶುರುವಾಗಿದೆ ಎರಡನೇ ಅಲೆಯು....... ಕಡ್ಡಾಯವಾಗಿ ಮಾಸ್ಕ್ ಹಾಕು ನಿನ್ನ ಜೀವ ನಿನ್ನ ಕುಟುಂಬಕ್ಕೆ ಮುಖ್ಯವಾಗಿ ಬೇಕು....... ಹೊರಗೆ ಹೋಗದಿರು  ಮನೆಯಲ್ಲಿಯೇ ನಿಮ್ಮವರೊಂದಿಗಿರು ಯಾವತ್ತೂ ಧೃತಿಗೆಡಬೇಡ  ನಿನ್ನ ಕ್ಷೇಮದಲ್ಲಿ ನೀನಿರು..........  ರಚನೆ,  ಸುಷ್ಮಾ  ಮುಳುಗಾಡು ತರಗತಿ, ಪ್ರಥಮ. ಬಿಕಾಂ (ಬಿ)

Article by, Sushma Mulugadu

ಬದಲಾಗುತ್ತಿದೆ ಜನ ಜೀವನ! ಲಾಕ್ ಡೌನ್ ನಿಂದಾಗಿ ಬದಲಾಗುತ್ತಿದೆ ಜನಜೀವನ, ಆದರೆ ಬದಲಾಗದೆ ಇದ್ದ ಮನುಕುಲವನ್ನು ಬದಲಾಗುವಂತೆ ಮಾಡಿದ್ದು ಮಾತ್ರ ಮಹಾಮಾರಿ ಕೊರೋನ ಎಂಬುವುದೇ ಸತ್ಯ.ಈ ಸೋಂಕು ಹೇಗೆ ಅಪ್ಪಳಿಸುತ್ತಿದೆ ಎಂದು ನಮಗೆ ಹೇಳಲು ಅಸಾದ್ಯ. ಕೊರೋನವೆಂಬ ಕಣ್ಣಿಗೆ ಕಾಣದ ಶಕ್ತಿಯೊಂದು ಆಕ್ರಮಿಸುತ್ತಾ ಜೀವಗಳನ್ನು ಬಲಿ ತೆಗೆದುಕೊಂಡು ಮುಂದೆ ಮುಂದೆ ಸಾಗುತ್ತಿದೆ.ಆದರೂ ಜನರು ತಮಗೆ ಬೇಕಾದ ಹಾಗೆ ಸಿಕ್ಕಸಿಕ್ಕಲ್ಲಿ ತಿರುಗಾಡುತ್ತಿದ್ದಾರೆ. ಒಟ್ಟಿನಲ್ಲಿ ಜನರ ಸೋಮಾರಿತನದ ಕಾರಣದಿಂದಲೇ ಸೋಂಕು ಹರಡಬಾರದೆಂಬ ಮುಂಜಾಗ್ರತ ಕ್ರಮದ ಜೊತೆಗೆ ಲಾಕ್ ಡೌನ್ ಜಾರಿಗೆ ತರಬೇಕಾದ ಪರಿಸ್ಥಿತಿ ಇಡೀ ರಾಜ್ಯ, ರಾಷ್ಟ್ರಕ್ಕೆ ಬಂದೊದಗಿದೆ .            ಒಂದನೇ ಅಲೆ  ಮುಗಿಯಿತೆಂದು ನಿಟ್ಟುಸಿರು ಬಿಡುವಾಗ ಎರಡನೆಯ ಅಲೆಯು ತನ್ನ ಹಾಜರಿ ತೋರಿದೆ. ಈ ವೈರಾಣು ದೊಡ್ಡ ದೊಡ್ಡ ನಗರದಲ್ಲಿ ಬಿಂದಾಸ್ ಆಗಿದ್ದ, ಮೋಜು ಮಸ್ತಿ-ಬಿಡುವಿಲ್ಲದ ಕೆಲಸದಲ್ಲಿ ಮಗ್ನರಾಗಿದ್ದ ಜನರಿಗೆ ತಮ್ಮ ಊರಿನ ಪರಿಚಯ ಮಾಡಿಕೊಟ್ಟಿದೆ.  ಎಷ್ಟೋ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಟ ನಡೆಸುವುದು ಒಂದುಕಡೆಯಾದರೆ,ಕುಟುಂಬಕ್ಕೆ ಆಸರೆಯಾದ ಸದಸ್ಯನನ್ನು ಕಳೆದುಕೊಂಡು ಮರಗುತ್ತಿರುವ ಅದೆಷ್ಟೋ ಜೀವಗಳು ಇಂದು ನಮ್ಮ ಕಣ್ಣಮುಂದೆಯೇ ಕಾಣಸಿಗುತ್ತಾರೆ.             ವರ್ತಮಾನದಲ್ಲಿ ಎತ...

Art by, Yashwini N S

Image
Art By, Yashwini N S Class,  2nd B.com (B)

Art By, Sudheendra

Image
Art by, Sudheendra Class, 2nd B.Com(B)

ಮೌನ, ಸಿಂಚನ.ಕೆ.ಯನ್

 *ಮೌನ* ಮಾತಾಡಿದರು, ನೀ ಕೊಡುವ ಉತ್ತರ ಮೌನ ಕೂಗಿದರು, ನೀ ಕೊಡುವ ಉತ್ತರ ಮೌನ ಸ್ನೇಹಿಸಿದರು, ನೀ ಕೊಡುವ ಉತ್ತರ ಮೌನ ಪ್ರೀತಿಸಿದರು, ನೀ ಕೊಡುವ ಉತ್ತರ ಮೌನ ಹೇ ಮೌನವೇ, ನೀ ಧರಿಸಿರುವುದು ಮುಖವಾಡವೇ? ರಚನೆ: ಸಿಂಚನ.ಕೆಯನ್ ದ್ವಿತೀಯ ಬಿ.ಕಾಂ