Article by, Sushma Mulugadu

ನಮ್ಮ ಜೀವನ

ಕೊರೋನಾದಲ್ಲಿ  ನಮ್ಮ ಜೀವನ.........
ಸಾಯುತಿವೆ ನೂರಾರು ಜೀವಗಳು 
ಕಾರಣ ತಿಳಿಯದೆ ಅಳುತಿವೆ ಶಿಶುಗಳು
ಯಾರೋ ಮಾಡಿದ ಪಾಪ 
ಸಿಕ್ಕಿದೆ ದೇಶಕ್ಕೆ ಶಾಪ.....
ಒಳ್ಳೆಯ ಗಾಳಿಗೆ ಹೆಣಗುತ್ತಿವೆ ಜೀವಿಗಳು 
ಯಾರೋ ಮಾಡಿದ ಪಾಪಕ್ಕೆ ಅಳುತ್ತಿವೆ ದೇಶದ ಕಂದಮ್ಮಗ ಳು
ಕನಸು ಕಟ್ಟಿದ ಕಂಗಳಲಿ
ಈಗ ಕಾಣುತ್ತಿದೆ ಕಣ್ಣೀರಧಾರೆ....
ಅಸ್ಥವ್ಯಸ್ಥವಾಗಿದೆ  ವ್ಯಾಪಾರಸ್ಥರ ಜೀವನ 
ಯಾವತ್ತು ತೊಲಗುವುದೋ  ಈ ಕೊರೋನಾ?
ಒಂದನೇ ಅಲೆಯಲ್ಲಿ ಮುಗಿಯಿತೆಂದರೆ
ಶುರುವಾಗಿದೆ ಎರಡನೇ ಅಲೆಯು.......
ಕಡ್ಡಾಯವಾಗಿ ಮಾಸ್ಕ್ ಹಾಕು
ನಿನ್ನ ಜೀವ ನಿನ್ನ ಕುಟುಂಬಕ್ಕೆ ಮುಖ್ಯವಾಗಿ ಬೇಕು.......
ಹೊರಗೆ ಹೋಗದಿರು 
ಮನೆಯಲ್ಲಿಯೇ ನಿಮ್ಮವರೊಂದಿಗಿರು
ಯಾವತ್ತೂ ಧೃತಿಗೆಡಬೇಡ 
ನಿನ್ನ ಕ್ಷೇಮದಲ್ಲಿ ನೀನಿರು.......... 

ರಚನೆ,  ಸುಷ್ಮಾ  ಮುಳುಗಾಡು
ತರಗತಿ, ಪ್ರಥಮ. ಬಿಕಾಂ (ಬಿ)

Comments