ಅನುಮೇಘ: Sushma Mulugadu
ಅನುಮೇಘ...
ಮೌನವೀ ಮನವೇ.....
ಮನದಲೊಂದು ರಾಗವೇ.....
ಹೃದಯದಾ ನಾದವೇ.....
ಮಳೆಯ ಸ್ವರದ ತಾಳವೇ....
ಹನಿ ಹನಿಯಲ್ಲಿ ಚುಂಬಿಸುವೆ
ಭೂಮಿಯ ......
ಮೌನದೀ ನೋಡಲು ನಿನ್ನ ಸೌಂದರ್ಯ.....
ಹಸಿರಾಯಿತು ಕಾಡು,ಗರಿ ಬಿಚ್ಚಿ ಕುಣಿಯಿತು ನವಿಲು....!
ತಂಪಾದ ತಂಗಾಳಿಯ ಹಾಡು,
ನಾ ಸುಮ್ಮನೆ ಕುಳಿತು ಆಲಿಸಲು...
ನಿನ್ನ ಹನಿಯ ಮುತ್ತಾಗಿ ಪೋಣಿಸಲು ನಾನು,
ಕೈ ಜಾರಿ ಹೋಗುತಿಹೆ ನೀನು.....
ಪಕ್ಷಿಗಳು ಸೇರುತಿಹವು ಗೂಡು .,
ನಿನಗಾಗಿ ಹುಡುಕುತ್ತಿರುವೆ ಪದಗಳ ಸಾಲು.....
ಬಣ್ಣಿಸಲು ಅಸಾಧ್ಯದಲ್ಲಿ ಅಸಾಧ್ಯ ನೀನು.....
ನಿನ್ನ ವರ್ಣಿಸಲು ಪಯತ್ನಿಸುವೆ ನಾನು .......
- ಸುಷ್ಮಾ ಮುಳುಗಾಡು
ಪ್ರಥಮ ಬಿ ಕಾಂ 'ಬಿ'
Comments
Post a Comment